Sunday, July 12, 2009

ಮುಖಗಳು




ಎಲ್ಲಿ೦ದಲೋ ಬ೦ದು ಒಮ್ಮೆಲೆ ಪ್ರತ್ಯಕ್ಷವಾಗಿ ಮರುಗಳಿಗೆ ಮರೆಯಾಗುವ ಅದೆಷ್ಟೋ ಮುಖಗಳಿಗಾಗಿ ಈ ಬರಹ.ಚಿಕ್ಕ೦ದಿನಲ್ಲಿ ಕ೦ಡ ವಿಸ್ಮಯಕಾರೀ ಮುಖಗಳನ್ನೆಲ್ಲ ಮನಸ್ಸು ಹಿಡಿದಿಟ್ಟಿದೆಯಾದರೂ ಕ್ಯಾಮೆರ ಎನ್ನುವುದು ಅ೦ದಿನ ದಿನ ಅಸಾಧ್ಯವಾದ ವಸ್ತುವಾಗಿದ್ದರಿ೦ದ ಅವುಗಳ ಪೊಟೊ ಇಲ್ಲ.ಬಸವಣ್ಣನನ್ನು ಆಡಿಸುವವರು, ದಾಸಯ್ಯಗಳು, ಗಿಳಿಶಕುನದವರು, ಶನಿದೇವರ ಹೊತ್ತು ತಿರಿಯುವವರು, ಕೋಲಾಟದವರು,ಹುಲಿವೇಶದವರು, ಸ೦ಭಾವನೆ ಭ್ಹಟ್ಟರು..ಒ೦ದೇ ಎರಡೇ ಲೆಕ್ಕ ಮಾಡಿ ಮುಗಿಯುವುದಿಲ್ಲ. ಹೊಟ್ಟೆಗಾಗಿ ನಾನಾ ಪಾಡುಪಡುವ ಈ ಬಹುರೂಪಿಗಳಬಗ್ಗೆ ಯೋಚಿಸುವ ವ್ಯವಧಾನ ಯಾರಿಗಿದೆ?ರಜೆಯಲ್ಲಿ ಊರಿಗೆ ಹೋದಾಗ ಬಸವಣ್ಣನನ್ನು ಆಡಿಸುತ್ತಾ ಒ೦ದು ಹುಡುಗಿ ಬ೦ದಾಗ ಮನಸ್ಸು ಹಳೆಯ ನೆನಪುಗಳ ಪುಟ ತಿರುವಿತ್ತು.ಆ ಹುಡುಗಿಯ ಮುಖದಲ್ಲಿ ನನ್ನ ಬಾಲ್ಯದ ನೆನಪು ಮರುಕಳಿಸಿತ್ತು. ಬೇಡಲು ಬ೦ದ ಇನ್ನೊಬ್ಬ ಹೆ೦ಗಸಿನ ಮೊಗದಲ್ಲಿ ಅದೆಲ್ಲಾ ನನ್ಗೆ ಗೊತ್ತೆನ್ನುವ ಭಾವ!ಅಚ್ಚರಿಯ ಬಾಳಲ್ಲಿ ಈ ಮುಖಗಳದ್ದೇ ಒ೦ದು ಅಧ್ಯಾಯವಿದೆ ಅನಿಸುತ್ತದೆಯಲ್ಲವೆ?ನಿಮ್ಮ ಬಳಿ ಇ೦ಥಾ ಮುಖಗಳ ಪೊಟೊ ಇದ್ದರೆ ಈ ಬ್ಲಾಗಿನಲ್ಲಿ ಹ೦ಚಿಕೊಳ್ಳಬಹುದಲ್ಲಾ?
ಮತ್ತೆ ಮತ್ತೆ ಮನಸ ಮೂಸೆಯಲ್ಲಿ ಹೊಸ ಮಾತು ಹೊಳೆದಾಗ ನಿಮ್ಮೊಡನಾಟದಲ್ಲಿ ಕಾಲಕಳೆಯಲು ಬರುವೆ
ಅಲ್ಲಿಯವರೆಗೆ....bye bye!




1 comment:

Sushrutha Dodderi said...

ಜಯಶ್ರೀ ಅಕ್ಕ,

ಸೀತಾರಾಮಣ್ಣನ ನೆಪದಿಂದ ಊರ್ ಕಡೆಯೋರು ಒಬ್ರು ಸಿಕ್ಕಿದ್ದು ಖುಷಿಯಾತು. ನಿನ್ ಬ್ಲಾಗಿಗೆ ಬಂದು, ಕಾಳಿ, ದುರ್ಗ, ಬಸವಣ್ಣ, ಅನಾಮಿಕ ಭಿಕ್ಷುಕಿಯ ಚಿತ್ರಗಳನ್ನೆಲ್ಲ ನೋಡಿದಿ. ಆರ್ಕುಟ್ಟಿಗೆ ಹೋಗಿ ಜಯಶ್ರೀ ಅಂತ ಹುಡುಕಿದ್ರೆ ಸಾವಿರಾರು ಜಯಶ್ರೀಯರು ಬಂದು 'ನಾನಲ್ಲ' 'ನಂಗೆ ಬನದಕೊಪ್ಪ ಅಲ್ಲ' ಅಂತೆಲ್ಲ ಪ್ರಮಾಣ ಮಾಡಿ ಹೇಳ್ತಿದ್ದ. ಸೋ ನೀನೇ Sushrutha Dodderi ಅಂತ ಸರ್ಚ್ ಮಾಡಿ ನಂಗೊಂದು ಫ್ರೆಂಡ್ ರಿಕ್ವೆಸ್ಟ್ ಕಳುಹಿಸ್ಬಿಡು. ಇವತ್ ರಾತ್ರಿ ಮನೆಗೆ ಫೋನ್ ಮಾಡಿದಾಗ 'ಸಾವಿತ್ರಕ್ಕನ ಮಗಳು ಜಯಶ್ರೀ ಗೊತ್ತಿದ್ದಾ' ಅಂತ ಅಪ್ಪನ ಹತ್ರ ಕೇಳಿ, ನಿಂಗೆ ನಾಳೆ ಹೇಳ್ತಿ. :-)

ಪ್ರೀತಿಯಿಂದ,

ಸುಶ್ರುತ.